Mohan Rao Sharma

Mohan Rao Sharma

Last seen: 2 years ago

ನನ್ನ ಪರಿಚಯ. ನನ್ನಹೆಸರು: ವೇದಬ್ರಹ್ಮಶ್ರೀ ಆಚಾರ್ಯ ಟಿ.ಮೋಹನ ರಾವು ಶರ್ಮ. ಸ್ಥಪಥಿ . S/o ಕೀ ಶೇ ಬ್ರಹ್ಮಶ್ರೀ ಟೆ ಜಗ್ಗಾರಾವ್ ಆಚಾರ್ಯ. ವಿದ್ಯಾರ್ಹತೆ : --- ~~~~~~ ಶಿಲ್ಪ ಶಾಸ್ತ್ರಜ್ಞ,BVA,BFA(TS),BFA(TA) ವೇದಗಳ ಅಧ್ಯಯನ, ವೈಶ್ವಕರ್ಮಣ ಸಾಹಿತ್ಯ ಅಧ್ಯಯನ, ಪ್ರತಿಮಾಶಿಲ್ಪ (BFA--Traditional Sculpture) ದೇವಾಲಯಶಿಲ್ಪ (BFA-- Traditional Archeology ), BVA ಶಿಲ್ಪಶಾಸ್ತ್ರೋಪನ್ಯಾಸಕ , ಜ್ಯೋತಿಷ್ಯ ವಿದ್ವಾನ್, ನಾಡೀ ಜ್ಯೋತಿಷಿ, ವಾಸ್ತುಪ್ರವೀಣ, ಮತ್ತು ಪುರೋಹಿತರು. ಇವು ನನ್ನ15 ವರ್ಷಗಳ ವಿದ್ಯಾಸಾಧೆನೆ. ನನ್ನದಿನಚರಿ : - ~~~~~~~ ನಾನು ಸಂಧ್ಯಾವಂದನಾದಿ ನಿತ್ಯಾನುಷ್ಠಾನ ಗಳನ್ನು ನಿತ್ಯವೇದಪಾರಾಯಣ ಮತ್ತು ನಿತ್ಯ ಅಗ್ನಿಹೋತ್ರವನ್ನು ಮಾಡುವಂತಹ ಸಂಪ್ರದಾಯವನ್ನು ನಮ್ಮಮನೆಯಲ್ಲಿ ಅನುಸರಿಸಿಕೊಂಡು ಬರುತ್ತಿದ್ದೇವೆ. ಸ್ಥಪತಿ ಯಾಗಿ ಶಿಲ್ಪ ವೃತ್ತಿ ಯನ್ನೂ, ಕಲ್ಲು, ಮರ,ಲೋಹ ಮುಂತಾದ ಮಾಧ್ಯಮಗಳು,ದೇವಾಲಯ ನಿರ್ಮಾಣ, ಸಾಂಪ್ರದಾಯಿಕ ವರ್ಣಚಿತ್ರಗಳು, ಜ್ಯೋತಿಷ್ಯ, ವಾಸ್ತು ಮತ್ತು ಪುರೋಹಿತ ವನ್ನು ಮಾಡುತ್ತೇವೆ. ನನ್ನ ಚಟುವಟಿಕೆಗಳು ~~~~~~~~~~~ 1. ನಾನು ಶಾಸ್ತ್ರಾನುಸಾರ ಆಯಾದಿ ಗಣಿತವನ್ನು ಬಳಸಿ ಶಿಲ್ಪಾ ಗಮ ಅನುಸಾರ ಯಜ್ಞ ಹೋಮಾದಿಗಳು ಮಾಡುತ್ತಾ ಕರ್ತ ಬರ್ತಾ ಕ್ಷೇಮವಾಗಿ ಇರುವಂತೆ ಲೋಕಕಲ್ಯಾಣ ವಾಗುವಂತಹ ಶಿಲ್ಪವನ್ನು ಮಾಡುತ್ತೇನೆ. 2. ಶಾಸ್ತ್ರ ತಾಲಮಾನದ ಪ್ರಕಾರ ಚಿತ್ರಲೇಖನವನ್ನು ತೈಲವರ್ಣಾದಿ ವರ್ಣಗಳನ್ನು ಬಳಸುತ್ತಾ ಶಾಸ್ತ್ರೀಯ ಚಿತ್ರ ರಚನೆವನ್ನು ಮಾಡುತ್ತೇನೆ.ಗೌರವಸಂಭಾವನೆ ಪ್ರಶಂಸಾಪತ್ರ ಕೂಡಾಪಡೆದಿರುತ್ತಾನೆ. 3. ಶಿಲ್ಪಕಲಾ ಅಕಾಡೆಮಿ ವತಿಯಿಂದ ಸಾಂಪ್ರದಾಯಿಕ ಹೊಯ್ಸಳ ಶೈಲಿಯ 4 ಕಾಷ್ಠಶಿಲ್ಪ ಶಿಬಿರಗಳಲ್ಲಿ ಭಾಗವಹಿಸಿ ಗೌರವಸಂಭಾವನೆ , ಪ್ರಶಂಸಾಪತ್ರ ಗಳನ್ನು ಪಡೆದಿರುತ್ತಾನೆ. 5. ಶಿಲ್ಪ ಆಗಮೋಕ್ತ 3 ಶೀಲಾ ಶಿಲ್ಪ ಶಿಬಿರದಲ್ಲಿ ಭಾಗವಹಿಸಿರುತ್ತಾನೆ ಗೌರವಸಂಭಾವನೆ ಮತ್ತುಪ್ರಶಂಸಾಪತ್ರ ಗಳನ್ನು ಪಡೆದಿರುತ್ತಾನೆ. 6. ಹೊಯ್ಸಳರ ಕಾಲದ ಸ್ತಂಭಗಳು ನಿರ್ಮಾಣ ಶಿಬಿರದಲ್ಲಿ ಕೂಡ ಭಾಗವಹಿಸಿ ಗೌರವಸಂಭಾವನೆ ಪ್ರಶಂಸಾಪತ್ರ ಗಳನ್ನು ಪಡೆದಿರುತ್ತಾನೆ. 7. ಇಷ್ಟೇ ಅಲ್ಲದೆ ನನ್ನ ಸ್ವಂತ ಕ್ಕಾಗಿ ಬೆಂಗಳೂರು ಕಾಮಾಕ್ಷಿಪಾಳ್ಯದಲ್ಲಿ ಶಿಲ್ಪ ಶಾಲೆ ಒಂದು ನಡೆಸುತ್ತಿದ್ದೇನೆ. 8. ಜ್ಯೋತಿಷ್ಯವನ್ನು ಪ್ರಾಕ್ಟೀಸ್ ಮಾಡುತ್ತಾ ಪರಿಹಾರಗಳನ್ನು ಹೇಳುವ ಮೂಲಕ ಪರಿಹಾರ ಯಜ್ಞಯಾಗಾದಿಗಳನ್ನು ನಡೆಸುತ್ತಿರುತ್ತೇನೆ. 9. 2010 ರಿಂದ 2016 ನ ವರೆಗೂ ಶಿಲ್ಪಕಲಾ ಅಕಾಡೆಮಿ ಯಲ್ಲಿ ನನ್ನ ಗುರುಗಳಾದ ಡಾಕ್ಟರ್ ಜಿ ಜ್ಞಾನನಂದ ಅವರು ಅಧ್ಯಕ್ಷರಾಗಿ ಇರುವ ಸಮಯದಲ್ಲಿ ನನಗೂ ಮೈಸೂರು ಯೂನಿವರ್ಸಿಟಿ ಕೆಎಸ್ಒಯು ಮಾನ್ಯತೆ ಪಡೆದಿರುವ ಶಿಲ್ಪಶಾಸ್ತ್ರವನ್ನು ಬೋಧನೆ ಮಾಡುವ ಒಂದು ಗುರುಕುಲವನ್ನು ಕೊಟ್ಟಿರುತ್ತಾರೆ. ನನ್ನ ಗುರುಕುಲದಲ್ಲಿ ಎರಡು ಬ್ಯಾಚು ಶಿಲ್ಪ ವಿದ್ಯಾರ್ಥಿಗಳು ಬಿಎಫ್ಎ ಪದವಿಗಳನ್ನು ಪಡೆದುಕೊಂಡಿರುತ್ತಾರೆ. ನಂತರ ಕಾಲದಲ್ಲಿ ಸರ್ಕಾರ ಬದಲಾವಣೆ ಆದಮೇಲೆ ಕರ್ನಾಟಕ ರಾಜ್ಯದಲ್ಲಿ ಇದೇ ರೀತಿ 23 ಗುರುಕುಲಗಳಲನ್ನು ರದ್ದು ಮಾಡಿ ಒಂದೇ ಒಂದು ಶಿಲ್ಪ ಗುರುಕುಲಗಳ ಕೇಂದ್ರ ಮಾತ್ರವೇ ಮಲ್ಲತಳ್ಳಿ ಬೆಂಗಳೂರಿನಲ್ಲಿ ಮಾತ್ರವೇ ಇರುತ್ತದೆ.ಗುರುಕುಲಕ್ಕೆ ಡೀನ್ ಆಗಿ ಬೆಂಗಳೂರು ಯೂನಿವರ್ಸಿಟಿ ಕೆಳಗೆ ಕಾರ್ಯನಿರ್ವಹಣಾ ಆಗುತ್ತಿದೆ. ನನ್ನಪ್ರವೃತ್ತಿ:-- ~~~~~~ 1. ವೈಶ್ವಕರ್ಮಣ ವೈದಿಕ ಆಚಾರ ಜಾಗೃತಿ ಕರಣ ಶಿಬಿರಗಳನ್ನು ಮಾಡುತ್ತಿದ್ದೇನೆ. ಅವರವರ ಊರುಗಳಿಗೆ ಹೋಗಿ 1,3,5 ಅಥವಾ 7 ದಿನಗಳ ಕಾಲಪರಿಮಿತಿ ಯಂತೆ ಜಾಗೃತಿ ಕರಣ ಶಿಬಿರಗಳನ್ನು ನಡೆಸುತ್ತಾ ವೈಶ್ವಕರ್ಮಣ ರಲ್ಲಿ ವೈದಿಕ ಆಚರಣೆಗಳನ್ನು ರೂಢಿಮಾಡಿಸುವ ಮೂಲಕ ಶಿಬಿರಾರ್ಥಿಗಳಿಗೆ ಪಾಠ ಮತ್ತು ಸೂಕ್ತವಾದಶಿಕ್ಷಣವನ್ನು ಕೊಡುತ್ತೇನೆ. ಇದಕ್ಕಾಗಿ ಸಮಾಜದ ಮುಖಂಡರು ಮಠಗಳ ಹಾಗೂ ಸ್ವಾಮೀಜಿಗಳ ಸಹಾಯದೊಂದಿಗೆ ಇಂತಹ ಶಿಬಿರಗಳನ್ನು ಕರ್ನಾಟಕ,ಆಂಧ್ರಪ್ರದೇಶ,ತೆಲಂಗಾಣ ರಾಜ್ಯಗಳಲ್ಲಿ ನಡೆಸುತ್ತಾ ವಿಶ್ವಕರ್ಮ ವಂಶ ಬ್ರಾಹ್ಮಣರ ವೈದಿಕಆಚಾರ ವನ್ನು ಜಾಗೃತಿ ಕರಣ ಮಾಡುತ್ತಾ ಇರುತ್ತೇನೆ. ನನ್ನ ಗುರಿ ಏನೆಂದರೆ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲ ವೈಶ್ವಕರ್ಮಣ ರು ಉತ್ತಮ ವೈದಿಕ ಆಚಾರವಂತ ರಾಗಿ ಕಂಡುಬರುವಂತೆ ಮಾಡಬೇಕೆಂಬುದು ನನ್ನ ಆಸೆ. ಇದೇ ನಿಟ್ಟಿನಲ್ಲಿ ಕೆಲವು ಲೇಖನಗಳು ವಿಡಿಯೋಗಳನ್ನು ಮಾಡಿ ಅದರ ಮೂಲಕ ಫೇಸ್ಬುಕ್ ವಾಟ್ಸಪ್ ಗ್ರೂಪ್ ಗಳು ನನ್ನ ಯುಟ್ಯೂಬ್ ಚಾನೆಲ್ ಮಯಬ್ರಹ್ಮ ವೈದಿಕ ಜ್ಞಾನ ಎಂಬ ಚಾನಲ್ನಲ್ಲಿ ಪ್ರಚಾರಕ್ಕೆಬಳಸುತ್ತಿದ್ದೇನೆ. ನಾನು ಬರೆದಿರುವ ಕೆಲವು ವೈದಿಕ ಪರಿಶೋಧನಾ ಗ್ರಂಥಗಳು,ವೈಶ್ವಕರ್ಮಣ ತೆಲುಗು ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿರುವ ಪುಸ್ತಕಗಳನ್ನು ಮುದ್ರಣಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಮೊಬೈಲ್ ನಂಬರ್ 9341265719 ಸರ್ವೇ ಜನಾಃ ಸುಖಿನೋ ಭವಂತು ಧನ್ಯವಾದಗಳು

Member since Apr 15, 2022
 sthapathimohanarao@gmail.com

విశ్వ బ్రాహ్మణుల గురించి వైదిక చరిత్ర ఏం చెబుతుంది?- TM...

అప్పుడు యావత్ భూమండలాన్ని పరిపాలించిన చక్రవర్తి భువన విశ్వకర్మ చక్రవర్తి. ఆయన కా...

శివుడు ఎవరిని ధ్యానిస్తున్నాడు ,విష్ణువు, బ్రహ్మ ఎవరి ...

శివుడు నిత్యం తపస్సు చేసేది, విష్ణువు యోగ నిద్ర లో ధ్యానం చేసేది, బ్రహ్మ ఆ జపమాల...

రెండవరోజు వైదిక చరిత్ర-శిక్షణ శిబిరం గుంటూరు - ఆచార్య మ...

తప్పు చేస్తున్నారు.. - విశ్వకర్మ వ్రతం చేయాలి.. విశ్వకర్మ జయంతి కాదు , మహేంద్...

జ్యోతి ప్రజ్వలన తో ప్రారంభమైన వైశ్వకర్మణా వైదిక చరిత్ర ...

శ్రీ శ్రీ వేదబ్రాహ్మశ్రీ ఆచార్య మోహన రావు శర్మ గారు , తమ భుజస్కంధాల పై వేసుకుని ...